Skip to main content

ಅಸ್ಸಾಮಿನ ಒಂದು ನೃತ್ಯ ಪ್ರಕಾರ: ಅಂಕಿಯಾ ನಾತ್

 


ankia naat
ಕೃಪೆ:lokogandhar.com


ಅಸ್ಸಾಮಿನ ಸಾಂಪ್ರದಾಯಿಕ ನಾಟಕಗಳಲ್ಲಿ  ಒಂದಾದ ಅಂಕಿಯಾ ನಾಟ್ ಶ್ರೀಕೃಷ್ಣನ  ಕಥೆಗಳನ್ನು ಹೊಂದಿದೆ. ಇದನ್ನು ಬ್ರಜವಳಿ ಎಂಬ ಭಾಷೆಯಲ್ಲಿ ಬರೆಯಲಾಗಿದೆ. ನಿರೂಪಕನನ್ನು ಸೂತ್ರಧಾರ್ ಎಂದು ಕರೆಯುತ್ತಾರೆ ಮತ್ತು ವಾದ್ಯ ವೃಂದದೊಂದಿಗೆ  ರಂಗಮಂಚದಲ್ಲೇ ಉಪಸ್ಥಿತರಿರುತ್ತಾರೆ. 

ಪ್ರಾಚೀನ ಕಾಲದಿಂದಲೂ ನಾಟಕಗಳು, ಹಾಡು-ಕುಣಿತಗಳು ಭಾರತದಲ್ಲಿ ಪ್ರಚಲಿತದಲ್ಲಿ ಇತ್ತು. ನಮ್ಮ ದೇಶವು ವೈವಿಧ್ಯ ಸಂಸ್ಕೃತಿಗಳ ಆಗರ. ಪ್ರತಿಯೊಂದು ಪ್ರದೇಶವು ತನ್ನದೇ ಆದ ಕಲೆ, ನೃತ್ಯ ಪ್ರಕಾರಗಳನ್ನು ಹೊಂದಿದೆ. 

ಅಸ್ಸಾಂ ಎಂಬುದು ಈಶಾನ್ಯ ಭಾರತದ  ಸಪ್ತ ಸಹೋದರಿ ರಾಜ್ಯಗಳಲ್ಲಿ ಒಂದು. ತನ್ನದೇ ಆದ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಅಸ್ಸಾಮಿನಲ್ಲಿ, ಅಂಕಿಯಾ ನಾಟ್ ಎಂಬುದು ಒಂದು ನಾಟಕ ಪ್ರಕಾರವಾಗಿದೆ. 

ಶ್ರೀಕೃಷ್ಣನ ಕಥೆಗಳನ್ನೇ ಬಿಂಬಿಸುವ ಈ ಪ್ರಕಾರವು ಕರಾವಳಿಯ ಪ್ರಸಿದ್ಧ ಯಕ್ಷಗಾನವನ್ನೇ ಹೋಲುತ್ತದೆ. ಸಮಾಜ ಸುಧಾರಕರಾಗಿದ್ದ ಶ್ರೀಮಂತ ಸಂಕರದೇವ ಎಂಬ ಯತಿಗಳು ಇದನ್ನು ಪರಿಚಯಿಸಿದರು ಎಂದು ಹೇಳಲಾಗುತ್ತದೆ. ಹಳೆಯ ಅಸ್ಸಾಮಿ ಹಾಗೂ ಮೈಥಿಲಿ ಭಾಷೆಯಲ್ಲಿ ಬರೆದಿರುವ ಅಂಕಿಯಾ ನಾಟ್ ಡ್ರಾಮಾಗಳು ಮಧ್ಯ ಕಾಲದಿಂದಲೂ ನಡೆದುಕೊಂಡುಬಂದಿವೆ. ಅಸ್ಸಾಮಿ ಮತ್ತು ಮೈಥಿಲಿ ಭಾಷೆಯನ್ನು ಒಟ್ಟಾಗಿ ಬ್ರಜಾವಳಿ ಭಾಷೆ ಅನ್ನುವರು. ಸಂಪೂರ್ಣ ನಿರೂಪಣೆಯನ್ನು “ಭಾವೋನ” ಅಂತಲೂ ನಿರೂಪಕನನ್ನು “ಸೂತ್ರಧಾರ್” ಎಂದೂ ಕರೆಯುತ್ತಾರೆ. ವಾದ್ಯವೃಂದದವರು ರಂಗಮಂಚದ ಒಂದು ಬದಿಯಲ್ಲಿ ಕುಳಿತರೆ, ಸೂತ್ರದಾರ ಇನ್ನೊಂದು ಬದಿಯಲ್ಲಿ ಕುಳಿತು ನಿರೂಪಣೆ ನೀಡುತ್ತಾರೆ. ನಾರು- ದೆಮಾಲಿ ಮತ್ತು ಬೋರ್ ದೆಮಾಲಿ ಎಂಬ ಎರಡು ಕೈತಾಳ ಶೈಲಿಗಳನ್ನು ವಾದ್ಯ ವೃಂದದವರು  ಉಪಯೋಗಿಸುತ್ತಾರೆ. 

ಪೂರ್ವರಂಗದಲ್ಲಿ,(Background) ಸಂಸ್ಕೃತ ಶ್ಲೋಕದ ಮುನ್ನುಡಿಯೊಂದಿಗೆ ಆರಂಭವಾಗುವ ಅಂಕಿಯಾ ನಾಟ್ ಅನೇಕ ದೃಶ್ಯಗಳನ್ನೂ, ಅರ್ಥಗರ್ಭಿತವಾದ ವಿವರಣಾತ್ಮಕ ಸನ್ನಿವೇಶಗಳನ್ನು ಒಳಗೊಂಡಿರುತ್ತದೆ. ಹಿಂದಿನ ಕಾಲದಲ್ಲಿ ಇದನ್ನು ಕೇವಲ ವಿದ್ಯಾವಂತರು ಮಾತ್ರ ವೀಕ್ಷಿಸುತಿದ್ದರಂತೆ!   

ಈ ಲೇಖನವನ್ನು Spotify ನಲ್ಲಿ ಆಲಿಸಲು ಇಲ್ಲಿ ಒತ್ತಿ.

  


Comments