Skip to main content

Featured post

How to start a blog in 2025: Step by step guide for beginners.

" " " Learn how to start a blog in 2025  with step-by-step tips on goals,  niches ,  SEO , and  content strategy  to grow your audience and earn online."

ಕೊರೊನಾ ವೈರಸ್

  ಕೊರೋನಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಕಿರೀಟ ಎಂದರ್ಥ. ಅದರ ರಚನೆಯು  ಕಿರೀಟ ಆಕಾರದಲ್ಲಿದೆ. 1968ರಲ್ಲಿ “ಜೂನ್ ಅಲ್ಮೇಡ” ಎಂಬ ವಿಜ್ಞಾನಿಯು ಈ ಹೆಸರನ್ನಿಟ್ಟರು. ಸೂಕ್ಷ್ಮದರ್ಶಕ ದಲ್ಲಿ ನೋಡಿದಾಗ ಕೋವಿಡ್ -19 ರ ದೇಹ ರಚನೆಯು “ಪೆಪ್ ಲೂಮಾರ್” ಎಂಬ ಪ್ರೊಟೀನ್ ನಿಂದಾಗಿದೆ ಎಂದು ಕಂಡುಬರುತ್ತದೆ ಹಾಗೂ ಪ್ರತಿ ವೈರಾಣುವಿನ ಗಾತ್ರ ಸುಮಾರು 60 – 140 ನ್ಯಾನೋ ಮೀಟರುಗಳು.

ಕೊರೋನಾ ಮಹಾಮಾರಿಯು ಇಳಿಮುಖ ಆಗೋ ಬೆನ್ನಲ್ಲೇ ಇನ್ನೊಂದು ಬ್ರಿಟನ್ ವೈರಸ್ ಅನ್ನೋ ಭೂತ ಜಗತ್ತನ್ನು ಕಾಡೋಕೆ ಶುರುಮಾಡಿದೆ (COV-2). ಕೋವಿಶೀಲ್ಡ್  ಅನ್ನೋ ಲಸಿಕೆ ದೇಶಿಯವಾಗಿ ತಯಾರಾದರೆ ಕೋವ್ಯಾಕ್ಸೀನ್ ಅನ್ನೋದು  ವಿದೇಶದ್ದು. 

Corona virus
ಕೃಪೆ:WHO official site


RNA ವೈರಸ್ ಗಳ ಗುಂಪಿಗೆ ಸೇರಿರುವ ಕೋರೋನಾ ವೈರಸ್ ಮೊದಲು ಸಸ್ತನಿಗಳು ಮತ್ತು ಪಕ್ಷಿಗಳಲ್ಲಿ ಕಂಡುಬಂದಿತ್ತು.ಇದು ಮನುಷ್ಯನಲ್ಲಿ ಉಸಿರಾಟದ ತೊಂದರೆಯನ್ನು ಉಂಟುಮಾಡಿದರೆ, ಇಲಿಗಳಲ್ಲಿ ಹೆಪಟೈಟಿಸ್-ಬಿ, ಹಸು,ಹಂದಿಗಳಲ್ಲಿ ಡಯೇರಿಯಾವನ್ನು ತರುತ್ತದೆ. ಕೋರೋನಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಕಿರೀಟ ಎಂದರ್ಥ. ಅದರ ರಚನೆಯು  ಕಿರೀಟ ಆಕಾರದಲ್ಲಿದೆ. 1968ರಲ್ಲಿ “ಜೂನ್ ಅಲ್ಮೇಡ” ಎಂಬ ವಿಜ್ಞಾನಿಯು ಈ ಹೆಸರನ್ನಿಟ್ಟನು. ಸೂಕ್ಷ್ಮದರ್ಶಕ ದಲ್ಲಿ ನೋಡಿದಾಗ ಕೋವಿಡ್ -19 ರ ದೇಹ ರಚನೆಯು “ಪೆಪ್ ಲೂಮಾರ್” ಎಂಬ ಪ್ರೊಟೀನ್ ನಿಂದಾಗಿದೆ ಎಂದು ಕಂಡುಬರುತ್ತದೆ. ಹಾಗೂ ಪ್ರತಿ ವೈರಾಣುವಿನ ಗಾತ್ರ ಸುಮಾರು 60 – 140 ನ್ಯಾನೋ ಮೀಟರುಗಳು.

1930ರ ಸಮಯದಲ್ಲಿ ಕೇವಲ ಹಸು, ಕುರಿ, ಒಂಟೆ ಹಾಗೂ ಅಳಿಲು ಮುಂತಾದ ದಂಶಕಗಳಲ್ಲಿ (Rodents) ಕೋರೋನಾ ಕಂಡುಬರುತಿತ್ತು. 

ಹೆಚ್ಚು ಕಡಿಮೆ ಇಂದಿಗೆ ಒಂದು ವರ್ಷದ ಮೊದಲಿಗೆ ಚೀನಾ ದೇಶದ ವುಹಾನ್ ನಗರದ ಮಹಿಳೆಯೊಬ್ಬರಲ್ಲಿ ಕಂಡು ಬಂದ ಈ ವೈರಾಣು ಕ್ರಮೇಣ ಜಗತ್ತಿನ ಎಲ್ಲೆಡೆ ವ್ಯಾಪಿಸಿತು.

2009ರಲ್ಲಿ ಅಲ್ಫಾ ಕೋರೋನಾ ವೈರಸ್, ಬೀಟಾ ಕೋರೋನಾ ವೈರಸ್ ಡೆಲ್ಟಾ ಕೋರೋನಾ ವೈರಸ್, ಗಾಮಾ ಕೋರೋನಾ ವೈರಸ್  ಎಂಬ ನಾಲ್ಕು ವಿಧಗಳನ್ನು ಪಟ್ಟಿ ಮಾಡಲಾಗಿದೆ. ಈ ಎಲ್ಲವೂ “ಅರ್ಥೋ ಕೋರೋನಾ ವೈರನೆ” ಎಂಬ ಕುಟುಂಬಕ್ಕೆ ಸೇರಿವೆ. ಮನುಷ್ಯನಲ್ಲಿ ಈವರೆಗೂ 7 ಬಗೆಯ ಕೋರೋನಾ ವೈರಸ್ಸುಗಳು ಕಂಡುಬಂದಿವೆ.

ಈ ವೈರಾಣು ಸೋಂಕಿನ ಪ್ರಮುಖ ಲಕ್ಷಣಗಳು ಏನೆಂದರೆ, ಜ್ವರ, ಒಣಕೆಮ್ಮು , ಸುಸ್ತಾಗುವಿಕೆ, ಮೈಕೈ ನೋವು, ನಾಲಿಗೆ ರುಚಿ ಇಲ್ಲದಾಗುವುದು, ಉಸಿರಾಟದ ತೊಂದರೆ ಇತ್ಯಾದಿ.  ಎಳೆಯ ಮಕ್ಕಳು ಹಾಗೂ ಐವತ್ತು ವರ್ಷ ಮೇಲ್ಪಟ್ಟವರಿಗೆ ಇದು ಹೆಚ್ಚ್ಕು ಮಾರಕ. ಸೋಂಕು ಹರಡಿದ 5 -6 ದಿನಗಳಲ್ಲಿ ಲಕ್ಷಣಗಳು ಕಂಡುಬರುತ್ತವೆ. 

ಇತರರಿಂದ ಕನಿಷ್ಟ ಮೂರು ಮೀಟರ್ ಅಂತರವಿರುವುದು, ಹೊರಗಡೆ ಹೋಗುವಾಗ ಮಾಸ್ಕ್ ಧರಿಸುವುದು, ಸ್ಯಾನಿ ಟೈಜರ್ ಬಳಕೆ  ಮಾಡುವುದರಿಂದ ಕೋರೋನಾದಿಂದ ರಕ್ಷಣೆಯನ್ನು ಪಡೆಯಬಹುದಾಗಿದೆ. ಎಥೆನಾಲ್ (ಈಥೈಲ್ ಆಲ್ಕಹಾಲ್), ಕ್ಲೋರಿನ್ ಯುಕ್ತ ಕ್ರಿಮಿ ನಾಶಕ, ಪೆರೋಕ್ಸಿ ಅಸಿಟಿಕ ಆಸಿಡ್, ಕ್ಲೋರೋಫಾರ್ಮ್ಗಳಿಂದ ಈ ವೈರಾಣುಗಳು ನಾಶವಾಗುತ್ತವೆ.

ಬ್ರಿಟನ್ ವೈರಸ್ ಅನ್ನೋದು ಕೋರೋನಾದ ಇನ್ನೊಂದು ವಿಧವಾದವಾಗಿದ್ದು, ಇದು ಇನ್ನಷ್ಟು ಬೇಗನೆ ಹರಡುತ್ತದೆ ಹಾಗೂ ಲಕ್ಷಣಗಳು ಇನ್ನೂ ವಿಪರೀತ. 

ಕೋವ್ಯಾಕ್ಸಿನ್, ಕೋವಿಶೀಲ್ಡ್, ಪಿಫೈಜರ್ ಹೀಗೆ ಐದಾರು ತರಹದ ಲಸಿಕೆಗಳನ್ನು ವಿವಿಧ ದೇಶಗಳು ಅಭಿವೃದ್ಧಿ ಪಡಿಸಿವೆ.  ಭಾರತದ ಮುಂಬೈನ  ಸೀರಮ್ ಇನ್ಸ್ಟಿಟ್ಯೂಟ್   ಲಸಿಕೆಯನ್ನು ಮೊದಲಿಗೆ ಕರೋನಾ ವಾರಿಯರ್ಸ್ ಗಳಿಗೆ ನೀಡಲಾಗುತ್ತಿದೆ. ಒಟ್ಟು 28 ದಿನಗಳ ಅವಧಿಯಲ್ಲಿ ಎರಡು ಬಾರಿ ಇದನ್ನು ಪಡೆದುಕೊಲ್ಲಬೇಕೆಂದು ಆರೋಗ್ಯ ಸಚಿವಾಲಯವು  ನಿರ್ದೇಶನವನ್ನು ನೀಡಿದೆ.    

ಈ ಲೇಖನವನ್ನು podcast ನಲ್ಲಿ ಕೇಳಲು ಈ ಲಿಂಕ್ ಒತ್ತಿ.

Comments