Skip to main content

ಚರಿತ್ರೆ : ಚೌರಿ ಚೌರ ಘಟನೆ

 

ಮುಖ್ಯಾಂಶಗಳು:

  • 1922ರ ಫೆ. 4 ರಂದು ನಡೆಯಿತು.
  • ಚೌರಿ ಚೌರ ಎಂಬ ಊರು ಉತ್ತರ ಪ್ರದೇಶ ರಾಜ್ಯದ ಗೋರಖ್ ಪುರ ಜಿಲ್ಲೆಯಲ್ಲಿದೆ. 
  • ಗಾಂಧೀಜಿಯವರ ಅಸಹಕಾರ ಚಳುವಳಿಯು ಸ್ಥಗಿತಗೊಳ್ಳಲು ಈ ಘಟನೆಯು ಮುಖ್ಯ ಕಾರಣ. 
  • ಚಳುವಳಿಯಲ್ಲಿ ಸಾಗುತ್ತಿದ್ದ ಹೋರಾಟಗಾರರು, ಇಲ್ಲಿನ ಪೊಲೀಸ್ ಠಾಣೆಗೆ ದಾಳಿ ನಡೆಸಿ , ಬೆಂಕಿಯಿಟ್ಟರು. 
  • 22 ಪೊಲೀಸರು ಸಜೀವ ದಹನಗೊಂಡರು. 
  • ಫೆ. 22 ರಂದು ಗಾಂಧೀಜಿ ತಮ್ಮ ಚಳುವಳಿಯನ್ನು ಅರ್ಧಕ್ಕೆ ನಿಲ್ಲಿಸಿದರು. 
  • ಘಟನೆಯಲ್ಲಿ 19 ಜನ ಅರೆಸ್ಟ್ ಆದರು, 14 ಜನ ಜೀವಾವಧಿ ಶಿಕ್ಷೆಗೆ ಗುರಿಯಾದರು. 

ಘಟನೆಯ ಹಿನ್ನೆಲೆ:

1920ರ ಪ್ರಾರಂಭದಲ್ಲಿ ಗಾಂಧೀಜಿಯವರ ಕಾನೂನು ಭಂಗ ಚಳುವಳಿ ಅಂದರೆ ಉಪ್ಪಿನ ಸತ್ಯಾಗ್ರಹ ನಡೆದಿತ್ತು.  (ದಂಡಿ ಸತ್ಯಾಗ್ರಹ)ಈ ಚಳುವಳಿಗಳು ಬ್ರಿಟಿಷರು ಜಾರಿಗೆ ತಂದ ರೌಲಟ್ ಕಾಯಿದೆಯನ್ನು ವಿರೋಧಿಸಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಸಹಕಾರ ಚಳುವಳಿಯನ್ನು ಆರಂಭಿಸಿತ್ತು. ಅಂತಿಮವಾಗಿ ಸ್ವರಾಜ್ಯವನ್ನು ಪಡೆಯುವುದು ಈ ಚಳುವಳಿಯ ಮುಖ್ಯ ಉದ್ದೇಶವಾಗಿತ್ತು. 

ಘಟನೆಯ ಸಂಕ್ಷಿಪ್ತ ವಿವರಣೆ. 

ಭಗವಾನ್ ಅಹಿರ್ ಎಂಬುವವರ ಅಧ್ಯಕ್ಷತೆಯಲ್ಲಿ ಫೆ. 2 ರಂದು ಸ್ವಯಂಸೇವಕ ಚಳು ವಳಿಕಾರರು, ಆಹಾರ ಸಾಮಗ್ರಿಗಳ ಬೆಲೆ ಏರಿಕೆ ಮತ್ತು ಮದ್ಯ ಮಾರುಕಟ್ಟೆಯ ವಿರುದ್ಧ ಚಳುವಳಿ ನಡೆಸಿದರು. 

ಚೌರಿಚೌರ ಊರಿನ ದರೋಗ (ಇನ್ಸ್ಪೆಕ್ಟರ್) ಗುಪ್ತೆಶ್ವರ ಸಿಂಗ್ ನೇತೃತ್ವದ ಪೊಲೀಸರು ಈ ಚಳುವಳಿಯನ್ನು ಹತ್ತಿಕ್ಕಿದರು, ಪ್ರಮುಖ ನಾಯಕರನ್ನು ಬಂಧಿಸಲಾಯಿತು. ಬಂಧನವನ್ನು ಖಂಡಿಸಿ, 4 ನೇ ತಾರೀಕು  ಚೌರಿಚೌರದ ಮಾರುಕಟ್ಟೆಯಲ್ಲಿ ಸುಮಾರು 20000 ಜನರು ಪ್ರತಿಭಟನೆ ನಡೆಸಿದರು. ಘಟನೆಯಲ್ಲಿ, ಮಾರುಕಟ್ಟೆಯ ಒಂದು ಮದ್ಯದ ಅಂಗಡಿಯನ್ನು ಮುತ್ತಿಗೆ ಹಾಕಲಾಗಿತ್ತು. ಅನೇಕ ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇದರಿಂದ ಕೋಪಗೊಂಡ ಚಳುವಳಿಕಾರರು ಪೊಲೀಸ್ ಠಾಣೆಯ ಎದುರು ಧರಣಿಗೆ ಕುಳಿತು, ಪೊಲೀಸರ ಕ್ರಮದ ವಿರುದ್ಧ ಘೋಷಣೆ ಕೋಗಿದ್ದರು. ಪೊಲೀಸರ ಸಶಸ್ತ್ರ ಪಡೆಯು ಚಳುವಳಿಯನ್ನು ಹತ್ತಿಕ್ಕುವ ಸಲುವಾಗಿ, ಗೋಲಿಬಾರ್ (ಗಾಳಿಯಲ್ಲಿ ಗುಂಡು) ನಡೆಸಿತ್ತು. ಈಗ ಪ್ರತಿಭಟನೆಕಾರರ ಗುಂಪು ಇನ್ನಷ್ಟು ಕೋಪಗೊಂದು, ಪೊಲೀಸರ ಕಡೆಗೆ ಕಲ್ಲು ತೂರಾಟ ನಡೆಸಿತು. ಪರಿಸ್ಥಿತಿ  ಕೈತಪ್ಪಿ ಹೋಯಿತೆಂದು ಅರಿತ ಪೊಲೀಸ್  ಸಬ್ ಇನ್ಸ್ಪೆಕ್ಟರ್ ಪೃಥ್ವಿ ಪಾಲ್ ಎಂಬಾತ ಮುನ್ನೆಡೆದು ಹೋಗುತ್ತಿದ್ದ ಚಳುವಳಿಕಾರರ ಮೇಲೆ ಗುಂಡುಹಾರಿಸಲು ಆದೇಶಿಸಿದ್ದ. ಪೊಲೀಸರ ಗುಂಡಿಗೆ ಮೂವರು ಬಲಿಯಾದರು, ಅನೇಕರು ಗಾಯಗೊಂಡರು. 

ಒಂದು ಮಾಹಿತಿಯ ಪ್ರಕಾರ, ಪೊಲೀಸರು ಹೊಂದಿದ್ದ ಮದ್ದು ಗುಂಡುಗಳು ಬೇಗನೆ ಖಾಲಿಯಾದವು.  ಪೊಲೀಸರು, ಜನರ ಕಲ್ಲುಗಳ ಪ್ರಹಾರವನ್ನು ತಪ್ಪಿಸಿಕೊಳ್ಳಲು, ಪೊಲೀಸ್ ಠಾಣೆಯ ಒಳಗೆ ಅವಿತುಕೊಳ್ಳಬೇಕಾಯಿತು.

  ಮೊದಲೇ ಉದ್ರಿಕ್ತ ಗೊಂಡಿದ್ದ ಗುಂಪು, ಇನ್ನಷ್ಟು ಕೆರಳಿ, ಇಡೀ  ಠಾಣೆಗೆ ಬೆಂಕಿ ಇಟ್ಟಿತು. ಒಳಗಡೆ ಇದ್ದ ಸುಮಾರು 23 ಜನ ಪೊಲೀಸರು ಸಜೀವ ದಹನಗೊಂಡರು. 

19 ಮಂದಿಗೆ ಗಲ್ಲು ಶಿಕ್ಷೆಯಾಯಿತು. ಅದೆಷ್ಟೋ ಮಂದಿ ಜೈಲು ಸೇರಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಈ ಘಟನೆಯು ಒಂದು ಮೈಲುಗಲ್ಲಾಯಿತು.



Comments