Skip to main content

Featured post

How to start a blog in 2025: Step by step guide for beginners.

" " " Learn how to start a blog in 2025  with step-by-step tips on goals,  niches ,  SEO , and  content strategy  to grow your audience and earn online."

ಸಂಸತ್ತು ವಿಧೇಯಕ/ ಬಿಲ್ಲನ್ನು ಹೇಗೆ ಪಾಸು ಮಾಡುತ್ತದೆ?

  

ವಿಧೇಯಕ/ಬಿಲ್ಲನ್ನು ಸoಸತ್ತಿನ ಲೋಕ ಸಭೆ ಅಥವಾ ರಾಜ್ಯ ಸಭೆಯಲ್ಲಿ ಮಂಡಿಸಬಹುದು.  ಎರಡೂ ಸದನಗಳಿಂದ ಬಹುಮತದ ಒಪ್ಪಿಗೆ ದೊರೆತರೆ, ಆ ವಿಧೇಯಕವೂ ರಾಷ್ಟ್ರಪತಿಯವರ ಅನುಮೋದನೆಗೆ ಕಳುಹಿಸಲಾಗುತ್ತದೆ. ಅವರು ತಮ್ಮ ಶಿಫಾರಸ್ಸುಗಳನ್ನು ತಿಳಿಸಿ ತಿದ್ದುಪಡಿ ಮಾಡುವಂತೆ ವಾಪಸ್ ಕಳುಹಿಸಬಹುದು ಅಥವಾ ನೇರವಾಗಿ ಒಪ್ಪಿಗೆ ಸೂಚಿಸಬಹುದು. ಅನುಮೋದನೆ ಪಡೆದ ಬಿಲ್ಲು ಕಾರ್ಯರೂಪಕ್ಕೆ ಬರುತ್ತದೆ. 

ಕೇಂದ್ರ ಸರಕಾರವು ಇತ್ತೀಚೆಗೆ ಮೂರು ಕೃಷಿ ತಿದ್ದುಪಡಿ ವಿಧೇಯಕಗಳನ್ನು ಜಾರಿಗೊಳಿಸಿತ್ತು. ವಾಯುವ್ಯ ಭಾಗದ ರೈತರ ಆಕ್ರೋಶಕ್ಕೆ ಇದು ಕಾರಣವಾಗಿತ್ತು. ಅವರು ದೆಹಲಿಯ ಗಡಿಗಳಲ್ಲಿ ಧರಣಿ ಕುಳಿತದ್ದು, ಪೊಲೀಸರು ಮುಳ್ಳಿನ ಬೇಲಿಗಳು, ಬ್ಯಾರಿಕೆಡುಗಳನ್ನು ಅಳವಡಿಸಿದ್ದು ನಡೆಯಿತು. ಈ ಬಿಲ್ಲುಗಳನ್ನು ಹೇಗೆ ಪಾಸ್ ಮಾಡುತ್ತಾರೆ? ಅದು ಹೇಗೆ ಕಾರ್ಯರೂಪಕ್ಕೆ ಬರುತ್ತೆ ಅನ್ನೋದನ್ನ ನೋಡೋಣ. 

ಭಾರತದ ಸಂವಿಧಾನದ 109 ಹಾಗೂ 117ನೇ ಕಾಯಿದೆಗಳಂತೆ, ವಿಧೇಯಕ/ಬಿಲ್ಲನ್ನು ಸoಸತ್ತಿನ ಲೋಕ ಸಭೆ ಅಥವಾ ರಾಜ್ಯ ಸಭೆಯಲ್ಲಿ ಮಂಡಿಸಬಹುದು.  ಎರಡೂ ಸದನಗಳಿಂದ ಬಹುಮತದ ಒಪ್ಪಿಗೆ ದೊರೆತರೆ, ಆ ವಿಧೇಯಕವೂ ರಾಷ್ಟ್ರಪತಿಯವರ ಅನುಮೋದನೆಗೆ ಕಳುಹಿಸಲಾಗುತ್ತದೆ. ಅವರು ತಮ್ಮ ಶಿಫಾರಸ್ಸುಗಳನ್ನು ತಿಳಿಸಿ ತಿದ್ದುಪಡಿ ಮಾಡುವಂತೆ ವಾಪಸ್ ಕಳುಹಿಸಬಹುದು ಅಥವಾ ನೇರವಾಗಿ ಒಪ್ಪಿಗೆ ಸೂಚಿಸಬಹುದು.  ಎರಡೂ ಸದನಗಳಿಂದ ಬಹುಮತ ದೊರೆತಿಲ್ಲ ಅಂದರೆ ಆ ಬಿಲ್ಲು ಅಂಗೀಕಾರವಾಗುವುದಿಲ್ಲ. 

ಹಾಗೆಯೇ ಸದನದ (ಸೆಶನ್) ಅವಧಿ ಮುಗಿತು, ಸರ್ಕಾರ ಅಧಿಕಾರ ಕಳೆದುಕೊಂಡಿತು ಅಂದ ತಕ್ಷಣ, ಆ ಸರಕಾರವು ಇತ್ಯರ್ಥಗೊಳಿಸದ ಬಿಲ್ಲನ್ನು ಕೈಬಿಡಲಾಗುವುದಿಲ್ಲ ಹಾಗೂ ಎಲ್ಲರ ಒಪ್ಪಿಗೆ ಇದೆ ಅಂತ ಜಾರಿನೂ ಮಾಡಲ್ಲ. 

“ಆ ಬಿಲ್ಲು ನಮ್ಮ ಸರಕಾರ ಇದ್ದಾಗಲೇ ಪಾಸ್ ಆಗಿದ್ದು, ಈವಾಗಿನ ಸರಕಾರ ಮಾಡಿದ್ದಲ್ಲ” ಅಂತ ಕೆಲವು ವಿರೋಧ ಪಕ್ಷದವರ ಹೇಳಿಕೆಗಳನ್ನು ನಾವು ಈಗಾಗಲೇ ಕೇಳಿರುತ್ತವೆ.

ಕೆಲವೊಂದು ಪ್ರಕರಣಗಳನ್ನು ಗಮನಿಸಿ. 

1. ರಾಜ್ಯಸಭೆ / ಮೇಲ್ಮನೆ ಒಂದು ಬಿಲ್ಲು ತಯಾರಿಸಿದೆ, ಮತ್ತು ಅದನ್ನು ಲೋಕಸಭೆಗೆ ಕಳುಹಿಸಿದೆ, ಲೋಕಸಭೆನೂ(ಕೆಳ ಮನೆ)  ಒಪ್ಪಿಗೆ ಕೊಟ್ಟಿದೆ, ರಾಷ್ಟ್ರಪತಿಯವರು ಕೂಡ ಅನುಮೋದನೆ ನೀಡಿದ್ದಾರೆ.  - ಕಾಯ್ದೆ ಜಾರಿಗೆ ಬಂತು ಅಂತಾನೆ ಅರ್ಥ. 

2. ರಾಜ್ಯಸಭೆ / ಮೇಲ್ಮನೆಯು ಒಂದು ವಿಧೇಯಕ / ತಿದ್ದುಪಡಿಯನ್ನು ಲೋಕ ಸಭೆಗೆ ಕಳುಹಿಸಿದೆ, ಲೋಕಸಭೆ(ಕೆಳ ಮನೆ) ಬಹುಮತದ  ಒಪ್ಪಿಗೆ ಕೊಟ್ಟಿಲ್ಲ – ಕಾಯ್ದೆ ಜಾರಿಗೆ ಬರುವುದಿಲ್ಲ. 

3. ಮೇಲ್ಮನೆ-ಕೆಳಮನೆಗಳು ಬಿಲ್ಲಿಗೆ ಯಾವುದೇ ತಕರಾರು ಹೊಂದಿಲ್ಲ, ಆದರೆ ರಾಷ್ಟ್ರಪತಿಗಳು ಅನುಮೋದನೆ ಕೊಟ್ಟಿಲ್ಲ, ಈ ತರಹ ಒಂದು ಬದಲಾವಣೆ ಮಾಡಿ ಎಂದು ಶಿಫಾರಸ್ಸು ಮಾಡಿ ಹಿಂದೆ ಕಳುಹಿಸಿದ್ದಾರೆ  – ಕಾಯ್ದೆ ಜಾರಿಗೆ ಬರಲ್ಲ ಅಂದರೆ ಬಿಲ್ಲು ಇತ್ಯರ್ಥ ಆಗಿಲ್ಲ ಅಂತ ಅರ್ಥ. 

4. ಲೋಕಸಭೆ ಒಂದು ವಿಧೇಯಕ ತಯಾರಿಸಿ, ರಾಜ್ಯಸಭೆಗೆ ನೀಡಿದೆ, ರಾಜ್ಯಸಭೆ ಅದಕ್ಕೆ ಸಮ್ಮತಿ ಕೊಡದೆ, ಬದಲಾವಣೆ ಮಾಡಿ ಎಂದು ಶಿಫಾರಸ್ಸು ಮಾಡಿ, ಪುನಃ ಕಳುಹಿಸಿದೆ, ಆದರೆ ಲೋಕಸಭೆ ಏನೂ ಬದಲಾಯಿಸದೆ ರಾಶ್ರಯಪತಿಗಳ ಅಂಗೀಕಾರವನ್ನು ಪಡೆದುಕೊಂಡಿದೆ. – ಕಾಯ್ದೆ ಜಾರಿಗೆ ಬರುತ್ತದೆ,

5. ಲೋಕಸಭೆ ಒಂದು ವಿಧೇಯಕ ತಯಾರಿಸಿ, ರಾಜ್ಯಸಭೆಗೆ ನೀಡಿದೆ, ಆರು ತಿಂಗಳಾದರೂ ರಾಜ್ಯಸಭೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲೋಕಸಭೆಯಉ ನೇರವಾಗಿ ರಾಷ್ಟ್ರಪತಿಗಳ ಒಪ್ಪಿಗೆಗೆ ಬಿಲ್ಲನ್ನು ಕಳುಹಿಸಬಹುದು. 

ಆದರೆ ರಾಜ್ಯ ಸಭೆಯು ಯಾವತ್ತೆ ಆಗಲಿ, ಮನಿ ಬಿಲ್ಲನ್ನು (ಧನ ವಿಧೇಯಕ) ಪಾಸ್ ಮಾಡುವ ಅಧಿಕಾರವನ್ನು ಹೊಂದಿಲ್ಲ. ಲೋಕಸಭೆಯಿಂದ ಬಂದ ಧನ ವಿದೆಯಕಕ್ಕೆ ಒಪ್ಪಿಗೆ ಅಥವಾ ಸಲಹೆಗಳನ್ನು ನೀಡಿ 14ದಿನಗಳ ಒಳಗೆ ರಾಜ್ಯಸಭೆ ಕಳುಹಿಸಬೇಕು, ಇಲ್ಲವಾದಲ್ಲಿ ಲೋಕಸಭೆಯು ನೇರವಾಗಿ ರಾಷ್ಟ್ರಪತಿಗಳ ಅನುಮೋದನೆಗಾಗಿ ವಿಧೇಯಕವನ್ನು ಕಳುಹಿಸಬಹುದಾಗಿದೆ.   

ರಾಜ್ಯಸಭೆಯು, 1982ರಿಂದ ಇದುವರೆಗೂ ಒಟ್ಟು 3817 ವಿಧೇಯಕಗಳನ್ನು ಇತ್ಯರ್ಥ ಗೊಳಿಸಿದೆಯಂತೆ!.

ಈ ಪೋಸ್ಟನ್ನು Spotify ನಲ್ಲಿ ಕೇಳಲು ಇಲ್ಲಿ ಕ್ಲಿಕ್ ಮಾಡಿ.


Comments