Skip to main content

Featured post

How to start a blog in 2025: Step by step guide for beginners.

" " " Learn how to start a blog in 2025  with step-by-step tips on goals,  niches ,  SEO , and  content strategy  to grow your audience and earn online."

ಏನಿದು ಲಿಥಿಯಂ?


ಕೃಪೆ: greentechmedia.com


ಲೀಥಿಯಂ[Li20] ಅನ್ನು ಮುಖ್ಯವಾಗಿ ಬ್ಯಾಟರಿಯ ತಯಾರಿಕೆಯಲ್ಲಿ ಬಳಸುತ್ತಾರೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾದಂತೆ ಇದರ ಬೇಡಿಕೆಯೂ ಹೆಚ್ಚಾಗಿದೆ. ಮಂಡ್ಯದ ಶ್ರೀರಂಗಪಟ್ಟಣದ ಸಮೀಪದ ಅಲ್ಲಾಪಟ್ನಾ ಪ್ರದೇಶದಲ್ಲಿ ಪರಮಾಣು ಮತ್ತು ಖನಿಜ ನಿರ್ದೇಶನಾಲಯ ಈ ನಿಕ್ಷೇಪವನ್ನು ಹುಡುಕಿದೆ. ಸುಮಾರು 14,100 ಟನ್ ನಿಕ್ಷೇಪ ಇರಬಹುದು ಅಂತ ಅಂದಾಜು ಮಾಡಿದ್ದಾರೆ.

ಮೊದಲ್ಲೆಲ್ಲಾ ನಡೆದುಕೊಂಡೇ ಹೋಗುತಿದ್ದ ಅಲೆಮಾರಿ ಮನುಷ್ಯನು, ನಾಗರೀಕತೆ ಆರಂಭವಾದ ನಂತರ, ಎತ್ತು, ಒಂಟೆ, ಕುದುರೆಗಳನ್ನು ಬಳಕೆ ಮಾಡಲು ಆರಂಭಿಸಿದ. ಚಕ್ರದ ಆವಿಷ್ಕಾರವೂ ಆಯಿತು, ಮಣ್ಣಿನ ಮಡಕೆಯ ಜೊತೆಗೆ ಗಾಡಿಗಳು ಸಿದ್ಧವಾದವು. ಅದೇ ರೀತಿ ಕುದುರೆ ಜಟಕಾ, ಎತ್ತಿನ ಬಂಡಿ, ತಳ್ಳುಗಾಡಿಗಳು ಬಂದವು. ಜೇಮ್ಸ್ ವ್ಯಾಟ್ ಅನ್ನುವವರು ಉಗಿಯಂತ್ರ ಕಂಡುಹಿಡಿದರು. ಕಲ್ಲಿದ್ದಲನ್ನು ಬಳಸುವ ರೈಲು ಸಾರಿಗೆ ಬಂತು.

ಸುಮಾರು ನೂರು ವರ್ಷಗಳ ಹಿಂದೆ ಬೆಂಜ್ ಕಾರಿನ ಸಂಸ್ಥಾಪಕ ಕಾರ್ಲ್ ಬೆಂಜ್ (Carl Benz) ರವರು 1879ರಲ್ಲಿ ಕಂಡುಹಿಡಿದ ಪೆಟ್ರೋಲ್ (ಗ್ಯಾಸೋಲಿನ್) ಇಂಜಿನ್, ರುಡಾಲ್ಫ್ ಡೀಸೆಲ್(Rudolf Diesel) ಕಲ್ಪನೆಯ ಡೀಸೆಲ್ ಇಂಜಿನ್ನುಗಳು(1890) ಸಾರಿಗೆ ಸಂಪರ್ಕದಲ್ಲಿ ಅವಿಷ್ಕಾರವನ್ನೇ ಸೃಷ್ಟಿಸಿದವು. ಅವು ಇಂದಿಗೂ ಬಳಕೆಯಲ್ಲಿ ಇವೆ. ಆರಂಭದಲ್ಲಿ ಸಾರಿಗೆ ವ್ಯವಸ್ಥೆಗೆ ದೊಡ್ಡ ಕೊಡುಗೆಯಾದ ಈ ಮೊಟಾರು ಇಂಜಿನ್ನುಗಳು ಈಗಿನ ಪರಿಸರ ಮಾಲಿನ್ಯ, ಅದರಲ್ಲೂ ವಾಯುಮಾಲಿನ್ಯಕ್ಕೆ ಮುಖ್ಯ ಕಾರಣಗಳಾಗಿವೆ.

ಈ ಇಂಧನಗಳ ಬಳಕೆಯು ಪ್ರಕೃತಿಯ ನಾಶಕ್ಕೆ ಕಾರಣ ಅಂತ ಪ್ರೈಮರೀ ಸ್ಕೂಲ್ ಮಕ್ಕಳಿಗೂ ಗೊತ್ತು, ಆದರೇನು ಮಾಡೋದು, ಜಗತ್ತು ಮುಂದುವರೆದಿದೆ, ಪಕ್ಕದ ಬೀದಿಗೆ ಹೋಗೋಕೆ ಬೈಕು – ಕಾರು ಅನ್ನೋರು ಇನ್ನೂ ಮೈಲುಗಟ್ಟಲೇ ನಡಕ್ಕೊಂಡು ಹೋಗ್ತಾರ? ಅಥವಾ ಹೆಗಲಲ್ಲಿ ಮೂಟೆ ಹೊತ್ತುಕೊಂಡು ಕಿಲೋಮೀಟರ್ ಗಟ್ಟಲೆ ನಡೆಯುವಷ್ಟು ತಾಕತ್ತು ಆಧುನಿಕ ಮಾನವನಿಗೆ ಇದೆಯಾ? ಅಷ್ಟು ಶಕ್ತಿ ಸಾಮರ್ಥ್ಯ ಕೊಡೋ ಅವಶ್ಯ ಆಹಾರ ಅವನಿಗೆ ಸಿಗುತ್ತಾ? ಖಂಡಿತಾ ಇಲ್ಲ. ನಿಜ ಹೇಳಬೇಕು ಅಂದರೆ ತಂತ್ರಜ್ಞಾನವು ಮುಂದುವರೆದಂತೆ, ಮನುಷ್ಯ ಸೋಮಾರಿ ಆಗ್ತಾ ಇದ್ದಾನೆ. ಅಂತಾದ್ದರಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದ ಒಂದು ದಿನವನ್ನು ಕಲ್ಪಿಸುವುದೂ ಅಸಾಧ್ಯ.

1832ರಲ್ಲಿ ಒಂದು ಕಚ್ಚಾ ಇ.ವಿ. (ಎಲೆಕ್ಟ್ರಿಕ್ ವೆಹಿಕಲ್) ರೆಡಿಯಾಗಿತ್ತು. ಇದರ ಹಿಂದಿದ್ದ ತಲೆ ರಾಬರ್ಟ್ ಅಂಡರ್ ಸನ್. ಆದರೆ ಅದು ಸಕ್ಸಸ್ ಆಗಿರಲಿಲ್ಲ. 1890ರಲ್ಲಿ ಅಮೆರಿಕದಲ್ಲಿ ವಿಲಿಯಮ್ ಮೊರಿಸನ್ (William Morrison) ತನ್ನ ಕಾರನ್ನು ವಿದ್ಯುತ್ ಚಾಲಿತಗೊಳಿಸಿದ್ದ. ನಂತರದಲ್ಲಿ ಬ್ಯಾಟರಿ ಚಾಲಿತ ವಾಹನಗಳು ನ್ಯೂಯಾರ್ಕ್ ತುಂಬೆಲ್ಲಾ ಸದ್ದು ಮಾಡಿದ್ದವು.

ಜಗತ್ತಿಗೆ ಎಲೆಕ್ಟ್ರಿಕ್ ಬಲ್ಬನ್ನು ನೀಡಿದ ಥಾಮಸ್ ಎಡಿಸನ್ ಕೂಡಾ ಬ್ಯಾಟರಿ ಚಾಲಿತ ಕಾರನ್ನು ಬಳಸಿದ್ದರು ಎಂಬ ದಾಖಲೆಗಳಿವೆ. ಅಷ್ಟರಲ್ಲಿ ಕಚ್ಚಾ ತೈಲಗಳ ಶುದ್ಧೀಕರಣ ಆರಂಭವಾಗಿತ್ತು. ಪೆಟ್ರೋಲ್, ಡೀಸಲ್ ಇಂಜಿನಗಳ ಹೆಚ್ಚಿನ ಸಾಮರ್ಥ್ಯವು ಎಲೆಕ್ಟ್ರಿಕ್ ವೆಹಿಕಲ್ ಗಳನ್ನು ಮೂಲೆಗುಂಪು ಮಾಡಿತ್ತು.

ಮೊದಲ ಹೈಬ್ರಿಡ್ ಎಲೆಕ್ಟ್ರಿಕ್ ಕಾರು ತಯಾರಿಸಿದ್ದು ಪಾರ್ಷ(Porsche) ಎಂಬ ಕಂಪನಿ. ಇಂದಿಗೂ ಇದು ಐಷಾರಾಮಿ ಕಾರುಗಳನ್ನು ತಯಾರಿಸುತ್ತದೆ.

“ಹಾವು ಸಾಯಬಾರದು; ಕೋಲು ಮುರಿಬಾರದು” ಅನ್ನೋದು ಪ್ರಚಲಿತ ಗಾದೆ ಮಾತು. ಈಗ, "ಸಾರಿಗೆ ವ್ಯವಸ್ಥೆಯೂ ಬೇಕು, ಮಾಲಿನ್ಯವೂ ಆಗಬಾರದು" ಅಂತ ವಿಜ್ಞಾನಿಗಳು ಯೋಚಿಸಿ ಕಂಡು ಹಿಡಿದದ್ದೇ ಎಲೆಕ್ಟ್ರಿಕ್ ವೆಹಿಕಲ್ಸ್ (ವಿದ್ಯುತ್ ಚಾಲಿತ ವಾಹನಗಳು).

ಲೀಥಿಯಂ[Li20] ಅನ್ನು ಮುಖ್ಯವಾಗಿ ಬ್ಯಾಟರೀ ತಯಾರಿಕೆಯಲ್ಲಿ ಬಳಸುತ್ತಾರೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾದಂತೆ ಇದರ ಬೇಡಿಕೆಯೂ ಹೆಚ್ಚಾಗಿದೆ. ಟೆಸ್ಲಾ ಎಲೆಕ್ಟ್ರಿಕ್ ಕಾರು ಭಾರತಕ್ಕೆ ಶೀಘ್ರದಲ್ಲಿ ಬರುತ್ತದೆ ಎಂದು ಸಂಸ್ಥಾಪಕ ಇಲಾನ್ ಮಸ್ಕ್ ಕೂಡಾ ಹೇಳಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣದ ಸಮೀಪದ ಅಲ್ಲಾಪಟ್ನಾ ಪ್ರದೇಶದಲ್ಲಿ ಪರಮಾಣು ಮತ್ತು ಖನಿಜ ನಿರ್ದೇಶನಾಲಯ ಈ ನಿಕ್ಷೇಪವನ್ನು ಹುಡುಕಿದೆ. ಸುಮಾರು 14,100 ಟನ್ ನಿಕ್ಷೇಪ ಇರಬಹುದೆಂದು ಅಂದಾಜು ಮಾಡಿದ್ದಾರೆ. ಇದಕ್ಕೂ ಮುಂಚೆ ಬೆಂಗಳೂರಿನ ನಾಗರ ಬಾವಿಯಲ್ಲಿ ಅತ್ಯಲ್ಪ ಪ್ರಮಾಣದ ನಿಕ್ಷೇಪ ದೊರೆತಿತ್ತು.

Comments