![]() |
ಕೃಷ್ಣ |
ಬ್ರಹ್ಮನ ಸೃಷ್ಟಿ
ಸೃಷ್ಟಿಕರ್ತ ಬ್ರಹ್ಮರು, ಮೊದಲಿಗೆ ಜೀವಿಗಳ ಭಾವನೆಗಳಾದ ಸಾವಿನ ಪ್ರಜ್ಞೆ, ಆತ್ಮ ವಂಚನೆ, ಕೋಪ, ಭೌತಿಕ ಪರಿಕಲ್ಪನೆ ಇತ್ಯಾದಿಗಳನ್ನು ಸೃಷ್ಟಿ ಮಾಡಿದರು. ಇಂತಹ ನೀರಸ ಸೃಷ್ಟಿಗಳಿಂದ ಬ್ರಹ್ಮರಿಗೆ, ತನ್ನ ಈ ಚಟುವಟಿಕೆಯ ಬಗ್ಗೆ ಬೇಸರ ಉಂಟಾಯಿತು. ಹಾಗಾಗಿ ಭಗವಂತನನ್ನು ಧ್ಯಾನಿಸಿ, ಪರಿಶುದ್ಧ ಮನಸ್ಸಿನಿಂದ ಮತ್ತೊಮ್ಮೆ ಸೃಷ್ಟಿ ಕಾರ್ಯ ಆರಂಭಿಸಿದರು.
ಈ ಬಾರಿ, ನಾಲ್ಕು ಋಷಿಗಳನ್ನು ಬ್ರಹ್ಮ ಸೃಷ್ಟಿಸಿದರು. ಅವರೇ ಸನಕ, ಸನಂದ, ಸನಾತನ ಮತ್ತು ಸನತ್ಕುಮಾರ. ಅವರುಗಳ ಮಹಾನ್ ವ್ಯಕ್ತಿತ್ವವು, ಅವರನ್ನು ಭೌತಿಕ ಚಟುವಟಿಕೆಗಳನ್ನು ಮಾಡುವುದರಿಂದ ಹಿಂದೆ ಸರಿಯುವಂತೆ ಮಾಡಿತ್ತು. ಹಾಗಾಗಿ ಜಗತ್ತಿನಲ್ಲಿ ಸಂತತಿಯನ್ನು ಹುಟ್ಟುಹಾಕುವ ಬ್ರಹ್ಮನ ಆಸೆಗೆ ಅವರು ಒಪ್ಪಲಿಲ್ಲ. ಬದಲಾಗಿ ಮೋಕ್ಷವನ್ನು ಪಡೆಯುವುದು ಅವರ ಗುರಿಯಾಗಿತ್ತು. “ತನ್ನ ಮರು ಪ್ರಯತ್ನದಲ್ಲೂ ವಿಫಲನಾದೆ” ಎಂದು ಬ್ರಹ್ಮ ಬೇಸರವನ್ನು ಪಟ್ಟುಕೊಂಡರು. ಜೊತೆಗೆ ಕೋಪವು ಬಂತು. ತನ್ನ ಕೋಪವನ್ನು ನಿಯಂತ್ರಿಸಲು ಯತ್ನಿಸಿದಾಗ, ಅವರ ಹುಬ್ಬುಗಳ ನಡುವಿನಿಂದ, ನೀಲಿ - ಕೆಂಪು ಮಿಶ್ರ ಬಣ್ಣಗಳ ಮಗುವಿನ ರೂಪದಲ್ಲಿ ಅದು ಹೊರ ಬಂತು. ಹೊರಗೆ ಬಂದ ಮಗುವು ಜೋರಾಗಿ ಅಳುತ್ತಾ, "ನನ್ನ ಹೆಸರು ಮತ್ತು ವಾಸದ ಜಾಗವನ್ನು ದಯವಿಟ್ಟು ತಿಳಿಸಿ." ಎಂದು ಕಿರುಚಿತ್ತು.
ಈಗ ಬ್ರಹ್ಮರು,”ನಿನ್ನ ಹೆಸರು ರುದ್ರ. ಮತ್ತು ನಿನ್ನ ವಾಸ ಸ್ಥಾನವು ಹೃದಯ, ಇಂದ್ರಿಯಗಳು, ಪಂಚಭೂತಗಳು, ಸೂರ್ಯ ಚಂದ್ರರು ಹಾಗೂ ತಪಸ್ಸು.ನಿನ್ನ ಹನ್ನೊಂದು ಮಡದಿಯರು ‘ರುದ್ರಾಣಿಯರು’ ಎಂದು ಕರೆಯಲ್ಪಡುವರು. ಪ್ರಪಂಚದ ಎಲ್ಲಾ ಜೀವಿಗಳ ಅಧಿಪತಿಯು ನೀನೇ. ನೀನು ಈ ಕೂಡಲೇ ಸೃಷ್ಟಿಯ ಕಾರ್ಯವನ್ನು ನಡೆಸು.” ಎಂದು ಹೇಳಿದರು.
ಹೀಗೆ ರುದ್ರರಿಂದ ಭೂಮಿಯಲ್ಲಿ, ಶಕ್ತಿ ಸಾಮರ್ಥ್ಯದಲ್ಲಿ ತನ್ನನ್ನೇ ಹೋಲುವ ಲಕ್ಷಾಂತರ ಜೀವಿಗಳ ಸೃಷ್ಟಿಯಾಗಿತ್ತು. ಅವರುಗಳ ಕಣ್ಣುಗಳಿಂದ ಬೆಂಕಿಯ ಜ್ವಾಲೆಗಳು ಹೊಮ್ಮುತಿದ್ದವು. ಅವು ಎಲ್ಲವನ್ನೂ ಸುಡುತಿದ್ದವು. ಆದರೆ ಅವರುಗಳ ಸಂಖ್ಯೆಯೂ ಬೆಳೆದಂತೆ, ಮಕ್ಕಳು ಮೊಮ್ಮಕ್ಕಳು ಒಟ್ಟಾಗಿ ಸೇರಿಕೊಂಡು ಇಡೀ ವಿಶ್ವವನ್ನೇ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸತೊಡಗಿದರು.
ಹೀಗೆ ಪುನಃ ಸೃಷ್ಟಿಗೆ ತೊಂದರೆ ಉಂಟಾದಾಗ, ಪಿತಾಮಹ ಬ್ರಹ್ಮರು, ರುದ್ರರನ್ನು ಕರೆದು, ಈ ಉಗ್ರ ರೂಪದ ಜೀವಿಗಳ ಸೃಷ್ಟಿ ಕಾರ್ಯವನ್ನು ನಿಲ್ಲಿಸಲು ಹೇಳಿ, ತಪಸ್ಸನ್ನು ಕೈಗೊಂಡು ಮನಸನ್ನು ಶಾಂತಗೊಳಿಸಲು ಹೇಳಿದರು. ಅದರಂತೆ ರುದ್ರರು ತಪಸ್ಸನ್ನು ಮಾಡಲು ಅರಣ್ಯದ ಕಡೆಗೆ ಹೊರಟರು.
ಬ್ರಹ್ಮನ ದೇಹತ್ಯಾಗ
![]() |
ಬ್ರಹ್ಮ |
ಈಗ ಬ್ರಹ್ಮ ಪುನಃ ಸೃಷ್ಟಿಯ ಕಡೆಗೆ ಗಮನ ಹರಿಸಿ, ಮರೀಚಿ, ಅಂಗೀರಸ,ನಾರದ ಮುಂತಾದ ಹತ್ತು ಗಂಡು ಮಕ್ಕಳನ್ನು ಪಡೆದರು.ಇವರಲ್ಲಿ ನಾರದರು ಕೊನೆಯವರು. ಈ ಹತ್ತು ಮಕ್ಕಳು ಬ್ರಹ್ಮ ನ ಮನಸ್ಸಿನಿಂದ ಸೃಷ್ಟಿಯಾದವು. ಹಾಗಾಗಿ ಅವರನ್ನು ಮಾನಸ ಪುತ್ರರು ಎಂದು ಕರೆಯುತ್ತಾರೆ. ಇವರಷ್ಟೇ ಅಲ್ಲದೆ “ವಾಕ್” ಎಂಬ ಒಬ್ಬ ಮಗಳನ್ನು ಬ್ರಹ ಪಡೆದರು. ಅಲ್ಲದೆ, ತನ್ನ ಸ್ವಂತ ಮಗಳ ಮೇಲೆ ಮೋಹವನ್ನು ಹೊಂದಿ, ಅವಳೊಂದಿಗೆ ದಾಂಪತ್ಯವನ್ನು ಹೊಂದಲು ಬಯಸಿದ್ದರು.ಇದರಿಂದ ಮಗಳಾದ ವಾಕ್ ಬಹಳ ದುಃಖಗೊಂಡಿದ್ದಳು.
“ಇದೇನು ವಿಧಿಯ ಆಟ?” ಎಂದುಕೊಂಡು, ಪರಮಾತ್ಮನಲ್ಲಿ ತನ್ನ ಮನಸ್ಸನ್ನು ಕೇಂದ್ರೀಕರಿಸಿ, ಧ್ಯಾನ ಮಗ್ನರಾದಾಗ, ಅವರ ಮನಸ್ಸಿನಿಂದ ಒಂದು ಪುರುಷ ಹಾಗೂ ಸ್ಟ್ರೀರೂಪಗಳ ಜನನವಾಯಿತು. ಪುರುಷನನ್ನು, ಮನುಕುಲದ ಸೃಷ್ಟಿಕರ್ತ “ಮನು”ವೆಂದೂ, ಸ್ತ್ರೀಯನ್ನು ಅವನ ಹೆಂಡತಿ “ದಶರೂಪಿ” ಯೆಂದು ಹೆಸರುಗಳನ್ನು ಇಡಲಾಯಿತು.
ಈ ದಂಪತಿಗಳಿಗೆ “ಪ್ರಿಯವೃತ” ಹಾಗೂ “ಉತ್ತನಾಪಾದ” ಎಂಬ ಇಬ್ಬರು ಪುತ್ರರು ಹಾಗೂ “ಆಕುತಿ”, “ದೇವಹುತಿ” ಹಾಗೂ “ಪ್ರಸೂತಿ” ಎಂಬ ಮೂವರು ಪುತ್ರಿಯರು ಜನಿಸಿದರು. ಇವರೆಲ್ಲರೂ ಕಾಲಕ್ಕೆ ಅನುಗುಣವಾಗಿ, ಮಕ್ಕಳು, ಮೊಮ್ಮಕ್ಕಳನ್ನು ಪಡೆದು, ಪ್ರಪಂಚದಲ್ಲಿ ಜನಸಂಖ್ಯೆಯ ಹೆಚ್ಚಳಕ್ಕೆ ಕಾರಣರಾದರು. ಪ್ರಜಾಪತಿ ಬ್ರಹ್ಮ ದೇವರ ಇಚ್ಛೆಯನ್ನು ಪೂರ್ಣಗೊಳಿಸಿದರು.
ಈ ಕಥೆಯನ್ನು ಯೂಟ್ಯೂಬ್ ನಲ್ಲಿ ವೀಕ್ಷಿಸಿ:
Comments
Post a Comment