Skip to main content

Featured post

How to start a blog in 2025: Step by step guide for beginners.

" " " Learn how to start a blog in 2025  with step-by-step tips on goals,  niches ,  SEO , and  content strategy  to grow your audience and earn online."

ಪ್ರಾಣಿ ಪರಿಚಯ: ಆಯ್ ಆಯ್ ಲೀಮರ್









ಪ್ರಪಂಚದ ಅತ್ಯಂತ ದೊಡ್ಡ ನಿಶಾಚರಿ(nocturnal) ಪ್ರಾಣಿಯಾದ ಆಯ್-ಆಯ್, ಆಫ್ರಿಕಾ ಖಂಡದ ಮಡಗಾಸ್ಗರ್ ದ್ವೀಪದ ಕಾಡುಗಳಲ್ಲಿ ಕಂಡುಬರುತ್ತದೆ. ಇದು ಲೀಮರ್ (Lemur) ಜಾತಿಗೆ ಸೇರಿದ ಪ್ರಾಣಿಯಾಗಿದ್ದು, ಮರಗಳ ಮೇಲೆ ವಾಸಿಸುತ್ತದೆ.

ಕೀಟಗಳು ಸಾಮಾನ್ಯವಾಗಿ ರೂಪಾಂತರ ಹೊಂದುತ್ತವೆ, ಅಂದರೆ ಕಂಬಳಿ ಹುಳವು ಚಿಟ್ಟೆಯಾಗಿ, ಬದಲಾಗುತ್ತದೆ. ಆ ರೂಪಾಂತರ ಹೊಂದುವ ಮೊದಲು ಲಾರ್ವಾವಸ್ಥೆಯನ್ನು (Larvae) ಹೊಂದುತ್ತದೆ. ಈ ಲಾರ್ವಾಗಳೇ ಆಯ್ ಆಯ್ ನ ಪ್ರಮುಖ ಆಹಾರ.

ರಾತ್ರಿಯಲ್ಲಿ ತನ್ನ ಆಹಾರವನ್ನು ಹುಡುಕುತ್ತಾ ಹೊರಗಡೆ ಹೋಗುವ ಆಯ್ ಆಯ್, ಮರಗಳನ್ನು ಬಡಿದು, ಅವುಗಳ ಪ್ರತಿಧ್ವನಿಯನ್ನು ಆಲಿಸಿ, ಲಾರ್ವಗಳನ್ನು ಪತ್ತೆ ಹಚ್ಚಿ, ಇದೆಯೇ ಎಂದು ಖಚಿತಪಡಿಸಿಕೊಂಡು, ಇದ್ದರೆ, ತನ್ನ ಬಾಚಿಹಲ್ಲುಗಳನ್ನು ಬಳಸಿ, ಮರದಲ್ಲಿ ರಂಧ್ರವನ್ನು ಕೊರೆದು, ಮಧ್ಯ ಬೆರಳಿನಿಂದ ಲಾರ್ವಾ ಗಳನ್ನು ಹೊರಗೆಳೆದು ತಿನ್ನುತ್ತದೆ. ಈ ವಿಧಾನವನ್ನು ಏಕೋ ಲೊಕೇಷನ್ (Eco Location) ವಿಧಾನ ಎನ್ನುತ್ತಾರೆ,

ಕೇವಲ ಮಾಡಗಾಸ್ಗರ್ ದ್ವೀಪದಲ್ಲಿ ಕಂಡುಬರುವ ಲೀಮರ್ ಗಳಲ್ಲಿ ಆಯ್ ಅಯ್, ದೋಬೆನ್ ಟೋನಿಯಾ (Daubentonia) ಎಂಬ ಕುಲಕ್ಕೆ ಸೇರಿರುವ ಏಕೈಕ ಸಸ್ತನಿಯಾಗಿದೆ. ದೋಬೆನ್ ಟೋನಿಯಾ ಎಂಬುದು ಒಬ್ಬ ಫ್ರೆಂಚ್ ಪ್ರಕೃತಿ ಶಾಸ್ತ್ರಜ್ಞನ ಹೆಸರು. ಅದೇ ರೀತಿ 1982ರಲ್ಲಿ ಆಯ್ ಆಯ್ ಎಂಬ ಹೆಸರನ್ನು ಇಟ್ಟವರು, ಪಿಯಾರ ಸೊನರಾತ್ ಎಂಬ ಇನ್ನೊಬ್ಬ ಫ್ರೆಂಚ್ ಪ್ರಕೃತಿ ಶಾಸ್ತ್ರಜ್ಞ. ಈ ಪ್ರಾಣಿಯು ಸಾಮಾನ್ಯವಾಗಿ 3 ಅಡಿ ಉದ್ದವಿರುತ್ತದೆ ಹಾಗೂ ಬಾಲವು ದೇಹಕ್ಕಿನತ ಉದ್ದವಾಗಿರುತ್ತದೆ. 6 ಬೆರಳುಗಳನ್ನು ಹೊದಿದೆ. ಮೂರನೆಯ ಬೆರಳು ಎಲ್ಲಕ್ಕಿಂತ ತೆಳುವಾಗಿರುತ್ತದೆ. ಆಯ್ ಆಯ್ ನ ದೇಹದ ತೂಕ ಸುಮಾರು 2 ಕೆಜಿಗಳು. ಅಳಿಲಿನಂತೆ, ಬೆನ್ನಿನ ಮೇಲೆ ಕಪ್ಪನೆಯ ಪಟ್ಟಿ ಇರುತ್ತದೆ. ಇದು ಮಿಶ್ರಹಾರಿ.

ಮರದ ಮೇಲೆ ಜೀವನದ ಹೆಚ್ಚ್ಕಿನ ಭಾಗವನ್ನು ಕಳೆಯುವ ಈ ದಂಶಕವು(Rodent) ಏಕಾಂಗಿ ಜೀವನವನ್ನು ಬಯಸುತ್ತದೆ. ತರಗೆಲೆ, ಕಡ್ಡಿಗಳಿಂದ ಗೋಳಾಕಾರದ ಗೂಡನ್ನು ನಿರ್ಮಿಸಿ, ಒಮ್ಮೊಮ್ಮೆ ಇನ್ನೊಂದು ಗಂಡು ಪ್ರಾಣಿಗೂ ಆಸರೆ ನೀಡುತ್ತದೆ. ಆದರೆ, ಸಂತಾನೋತ್ಪತ್ತಿಯ ಅವಧಿಯಲ್ಲಿ ಕೇವಲ ಹೆಣ್ಣು ಪ್ರಾಣಿಯನ್ನು ತನ್ನ ಗೂಡಿನಲ್ಲಿರಿಸಿಕೊಳ್ಳುತ್ತದೆ. ಶ್ವಾನಗಳ ಮಿಲನ ಕ್ರಿಯೆಯನ್ನು ಹೋಲುವ ಇವುಗಳ ಮಿಲನ ಕ್ರಿಯೆಯು ಸುಮಾರು ಒಂದು ಗಂಟೆಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಇವುಗಳಲ್ಲಿ ಕುಟುಂಬ ಜೀವನವಿಲ್ಲ, ಸಂತಾನೋತ್ಪತ್ತಿಗಾಗಿ, ಹೆಣ್ಣು ಪ್ರಾಣಿಯು ಬೇರೆ ಬೇರೆ ಗಂಡು ಪ್ರಾಣಿಗಳನ್ನೂ , ಅದೇ ರೀತಿ ಗಂಡು ಪ್ರಾಣಿಯೂ ಒಂದಕ್ಕಿಂತ ಹೆಚ್ಚ್ಕು ಹೆಣ್ಣು ಪ್ರಾಣಿಗಳನ್ನು ಸಂಪರ್ಕಿಸುತ್ತವೆ.

ಸ್ಥಳೀಯ ಜನರು, ಆಯ್ ಅಯ್ ಗಳನ್ನು ಕಂಡಲ್ಲಿ ಕೊಲ್ಲುತ್ತಾರೆ, ಇವುಗಳು “ಪಿಶಾಚಿಗಳ ಸ್ವರೂಪ” ಎಂದು ಅವರು ನಂಬುತ್ತಾರೆ. ಹಾಗೆಯೇ ಇದೊಂದು ಅಪಶಕುನದ ಪ್ರಾಣಿ ಎನಿಸಿಕೊಂಡಿದೆ. ಇವುಗಳು IUCN ನಿಂದ ಅಳಿವಿನಂಚಿನಲ್ಲಿರುವ (Endangered) ಪ್ರಾಣಿಗಳ ಪಟ್ಟಿಗೆ ಸೇರಿವೆ. ಅಮೆರಿಕಾದ ಉತ್ತರ ಕೆರೋಲಿನದಲ್ಲಿ ಇವುಗಳನ್ನು ಸಂರಕ್ಷಿಸಲಾಗಿದೆ.


IUCN- International Union for Conservation of Nature:

(ಅಂತರಾಷ್ಟ್ರೀಯ ನೈಸರ್ಗಿಕ ಸಂರಕ್ಷಣಾ ಸಂಘ), 1948ರಲ್ಲಿ ಫ್ರಾನ್ಸ್ ದೇಶದ ಫೌಂಟೆನ್ ಬ್ಲೂ ನಲ್ಲಿ ಸ್ಥಾಪನೆಗೊಂಡಿತು. ಜೂಲಿಯನ್ ಹಕ್ಸ್ ಲೇ ಇದರ ಸ್ಥಾಪಕರು. ಈವರೆಗೂ ನಲವತ್ತು ಸಾವಿರಕ್ಕೂ ಅಧಿಕ ಅಳಿವಿನ೦ಚಿನಲ್ಲಿರುವ ಪ್ರಬೇಧಗಳನ್ನು ಇದು ಪಟ್ಟಿಮಾಡಿದೆ.

Comments